`ಪಾತರಗಿತ್ತಿ` Uಟ್ಟಿಗಿತ್ತಿ
Posted date: 14 Thu, Nov 2013 – 10:28:14 AM

‘ಪಾತರಗಿತ್ತಿ’ ಸಿನೆಮಾಕ್ಕೊಂದು ಗಟ್ಟಿಗಿತ್ತಿ ಆಗಮನ ಆಗಿದೆ. ಅವರೇ ದಕ್ಷಿಣ ಭಾರತದ ಖ್ಯಾತ ಶಕೀಲಾ. ತಾವರೆಕೆರೆಯ ಬೂತ ಬಂಗ್ಲಾದಲ್ಲಿ ಶಕೀಲಾ ಕುಣಿದು ಕುಪ್ಪಳಿಸಿದ್ದಾರೆ. ಮೂರು ದಿವಸಗಳಲ್ಲಿ ಈ ಹಾಡನ್ನು ಚಿತ್ರಿಕರಿಸಿಕೊಳ್ಳಲಾಗಿದೆ. ಇದೊಂದು ಹೃದಯ ಬಡಿತ ಹೆಚ್ಚಿಸು ಹಾಡಂತು ಗ್ಯಾರಂಟಿ ಎನ್ನಬಹುದು.
‘ಪಾತರಗಿತ್ತಿ’ ಸಿನೆಮಾ ೩೭ ದಿವಸಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಕೇವಲ ಎರಡು ದಿವಸದ ಪ್ಯಾಚ್ ವರ್ಕ್ ಹಾಗೂ ಮೂರು ಹಾಡುಗಳನ್ನು ಮಾತ್ರ ಸೆರೆ ಹಿಡಿಯಬೇಕಿದೆ.  
ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು. ಕಳೆದ ಹತ್ತು ವರ್ಷಗಳಿಂದ ವಿಧ್ಯಾವಂತ ನಿರ್ದೇಶಕ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಸ್ವತಂತ್ರ ನಿರ್ದೇಶಕರಾಗಿ ಪಾದ ಬೆಳಿಸಿದ್ದಾರೆ. ಬದಲಾವಣೆ ಜಗತ್ತಿನ ನಿಯಮ. ಇದನ್ನೇ ಹೆಣ್ಣಿನ ದೃಷ್ಟಿಯಲ್ಲಿ ಇಟ್ಟುಕೊಂಡಿ ಹಲವಾರು ರೀತಿಯ ಬದಲಾವಣೆಯನ್ನು ತೆರೆಯಮೇಲೆ ಹೇಳಲಿದ್ದಾರೆ. ಹೆಣ್ಣಿನ ಮನಸ್ಸು ಚಂಚಲ. ಚಿಟ್ಟೆಯಂತೆ ಹಾರಾಡುತ್ತಲೆ ಇರುತ್ತದೆ ಎಂದು ಸೂಚ್ಯವಾಗಿ ನಿರ್ದೇಶಕರು ಹೇಳಲಿದ್ದಾರೆ.
‘ಪಾತರಗಿತ್ತಿ’ ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು, ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಮಾಡಲಿದ್ದಾರೆ. ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು.  ನಾಯಕನಾಗಿ ಶ್ರೀಕಿ, ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ. ತಬಲಾ ನಾಣಿ, ಲಕ್ಕಿ ಶಂಕರ್, ರಾಜು ತಾಳಿಕೋಟೆ, ಲಯೆನ್ದ್ರ, ಮಿತ್ರ, ಬುಲ್ಲೆಟ್ ಪ್ರಕಾಷ್, ಪೊತ್ರೆ ನಾಗರಾಜ್, ಬ್ರಹ್ಮವರ್, ಶಾಂತಮ್ಮ, ಚಿಕ್ಕಣ್ಣ, ಕುರಿ ಪ್ರತಾಪ್, ರಾಮನಯಕ್, ನೀಲಕಂತಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ.ಗಣೇಶ್ ಎಂ ಅವರ ಸಂಕಲನ, ಮದನ್ ಹರಿಣಿ, ಸದಾ ರಾಘವ್, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ, ಮಾಸ್ ಮಾಧ ಅವರ ಸಾಹಸ, ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed